Thursday, June 21, 2012

ಮಾತು  ಕಲಿಸುತ್ತೇನೆ  ಎಂದಿದ್ದಿ ,
ಮಾತನಾಡದ  ಹಾಗೆ ಮಾಡಿದಿ .


ಕನಸಿನ ಲೋಕವ ಸೃಷ್ಠಿಸಿ ,
ಕನವರಿಸುವ ಹಾಗೆ ಮಾಡಿದಿ .


ಭಾವನೆಗಳ ಹೂದೋಟ ಅರಳಿಸಿ ,
ಕಾರಣ ನಾನಲ್ಲ ಎಂದುಬಿಟ್ಟಿ .


ಕಾರಣ: ಹುಡುಕುತ್ತಾ ಕುಳಿತಿರುವೆ, ವಿನಾಕಾರಣ 
ನಿನ್ನದೇ ನೆನಪು ಕಾಡುತ್ತಿದೆ ಗೆಳತಿ.

Monday, June 18, 2012


THE MISSING BRICK

By Paulo Coelho

Once, when I and my wife were travelling, I received a fax from my secretary. 

'There's one glass brick missing for the work on the kitchen renovation,' she said. 'I'm sending you the original plan as well as the plan the builder has come up with to compensate for it.

On the one hand was the design my wife had made: harmonious lines of bricks with an opening for ventilation. On the other hand was the plan drawn up to resolve the problem of the missing brick: a real jigsaw puzzle in which the glass squares were arranged in a higgledy-piggledy fashion that defied aesthetics.

'Just buy another brick,' wrote my wife. And so they did and thus stuck to the original design.

That afternoon, I thought for a long time about what had happened; how often, for the lack of one brick, we completely distort the original plan of our lives.

Tuesday, November 9, 2010

" ದೀಪಾವಳಿ 2010"
ಬೆಳಕದುವೆ ನೋಡು ಆಗಸದಲ್ಲಿ ,
ಬೆಳಕಿನ ಹಬ್ಬದ ಆಚರಣೆಯಲ್ಲಿ ,
ಸೂರ್ಯ ಚಂದ್ರರ ಮರೆಮಾಚಿದೆ ,
ದೀಪಗಳ ಹಾವಳಿ ದೀಪಾವಳಿ

Sunday, March 7, 2010

?????

ಯಾರು ನೀ , ನಾ ಕಾಣೆ
ಬಚ್ಚಿಟ್ಟು ಕುಳಿತಿರುವೆ , ಮನದ ಮೂಲೆಯಲಿ
ಸಂಚಾರ ಮಾಡಿಸುವೆ , ಕನಸುಗಳ ಲೋಕದಲಿ
ಹೇಳು ನೀ ಯಾರು , ಬೇಗ , ನನ್ನಾಣೆ .

ಸತ್ಯಕ್ಕೆ ಸಾವಿಲ್ಲ
ಸಾವಿಲ್ಲದ ಮನೆಯಿಲ್ಲ
ಇದುವೇ ಜೀವನದ ವೈರುದ್ಯ ?

ಸಮರಸವೇ ಜೀವನ
ಸೋಮರಸದಿಂದೀ ಜೀವನ ಪಾವನ !

ಮದುವೆ ಎಂಬುದು ಹುಡುಗಾಟವಲ್ಲ
ಅದು ಹುಡುಗಾಟದ ಸಮಾಪ್ತಿ

ಪ್ರೀತಿ ಕುರುಡು
ಅದಿಲ್ಲದ ಜೀವನ ಬರದು

ಪ್ರೀತಿಯೆಂಬುದು ಹುಡುಗಾಟವೋ ಇಲ್ಲ ಹುಡುಕಾಟವೂ
ಅವೆರಡು ಅಲ್ಲ ....
ಹುಡುಗರ ಮನಸಿಗೆ ಹುಡುಗಿಯರ ಕಾಟ
ಹುಡುಗಿಯರ ಮನಸಿಗೆ ಹುಡುಗರ ಕಾಟ

ಮೌನ ಎಂಬುದು ಪ್ರೇಮಿಗಳ ಭಾಷೆಯಂತೆ
ಮನಸ್ಸು ಎಂಬುದು ಅವರುಗಳ ಮನೆಯಂತೆ
ಆಡದ ಮಾತಿನಲ್ಲಿ , ಕಾಣದ ಮನೆಯಲ್ಲಿರುವುದು ಪ್ರೇಮವೇ ?

ಒಬ್ಬ: ದೇಶ ಸುತ್ತಿ ನೋಡು , ಕೋಶ ಓದಿ ನೋಡು
ಮತ್ತೊಬ್ಬ : ದ್ವೇಷ ಬಿಟ್ಟು ನೋಡು , ಪ್ರೀತಿ ಮಾಡಿ ನೋಡು

Monday, December 21, 2009

ಆಲ್ಬರ್ಟ್ ಕಾಮೂಸ್ ನ ಉಲ್ಲೇಖನಗಳು


  1. ಎಲ್ಲ ಶಿಕ್ಷಕರ ಸತತ ಪ್ರಯತ್ನಗಳ ನಂತರ ನಾವು ಪುಸ್ತಕಗಳತ್ತ ಹೊರಳಬೇಕಿದೆ , ಪುಸ್ತಕಗಳೇ ನಿಜವಾದ ವಿಶ್ವವಿದ್ಯಾನಿಲಯಗಳು.

  2. ಸಾಧಾರಣವಾಗಿ ಬದುಕಲು ಅಸಾಧಾರಣ ಶಕ್ತಿ ಬೇಕು .

  3. ಬಾಗುವ ಮನಸ್ಸುಗಳು ಎಂದಿಗೂ ಮುರಿಯುವುದಿಲ್ಲ . ಮನುಷ್ಯನಾಗುವುದು ಕಷ್ಟಕರ ಮತ್ತು ಒಂದು ಕಹಿ ಅನುಭವ .

  4. ಪತ್ರಿಕಾ ಸ್ವಾತಂತ್ರ್ಯ ಒಳ್ಳೆಯದೂ ಮತ್ತು ಕೆಟ್ಟದ್ದೂ ಆಗಿರಬಹುದು . ಆದರೆ ಸ್ವಾತಂತ್ರ್ಯವಿಲ್ಲದ ಪತ್ರಿಕೆ ಬರೀ ಕೆಟ್ಟದ್ದಷ್ಟೇ ಆಗಿರಲಿಕ್ಕೆ ಸಾಧ್ಯ .

  5. ಅನಂತತೆಯ ತತ್ವಜ್ಞಾನ ಮಾತ್ರ ಅಹಿಂಸೆಯನ್ನು ಸಮರ್ಥಿಸಿಕೊಲ್ಲಬಲ್ಲದು .

  6. ನಿಮ್ಮ ಮತ್ತು ನೀವು ನಡೆಸುತ್ತಿರುವ ಜೀವನದ ನಡುವಿನ ಹೊಂದಾಣಿಕೆಯೇ ನಿಜವಾದ ಸಂತೋಷ .

  7. ನನಗೆ ನಿನ್ನ ಚಿತ್ರಗಳಲ್ಲ , ನಿನ್ನ ಚಿತ್ರಕಲೆ ಇಷ್ಟ .

  8. ನಿಮ್ಮ ತರ್ಕಗಳನ್ನು , ಪ್ರಾಮಾಣಿಕ ಪ್ರಯತ್ನಗಳನ್ನು ಎಲ್ಲರೂ ಒಪ್ಪಿಕೊಳ್ಳುವುದು ನೀವು ಸತ್ತ ನಂತರವೇ .

  9. ಸಮಾಜದ ಪರಿಸ್ಥಿತಿಯ ಬಗ್ಗೆ ನಿರಾಶಾವಾದಿಯಾದವನು ಹೇಡಿ , ಆಶಾವಾದಿಯಾಗಿರುವವನು ಮೂರ್ಖ .

  10. ಕೊನೆಯ ಕ್ಷಣಕ್ಕಾಗಿ ಕಾಯದಿರಿ , ಅದು ಪ್ರತಿದಿನವೂ ಬರುತ್ತದೆ .

  11. ಸ್ನೇಹಿತರೊಂದಿಗೆ ಪೂರ್ತಿ ಪ್ರಾಮಾನಿಕರಾಗಬೇಡಿ , ತಾವು ಒಳ್ಳೆಯವರೆಂಬ ತಮ್ಮ ನಂಬಿಕೆ ಸುಳ್ಳಾ ಗುವುದು ಅವರಿಗೆ ಇಷ್ಟವಿರುವುದಿಲ್ಲ .
  12. ದೇವರನ್ನು ನಂಬದೆ ಬದುಕುತ್ತ , ಇದ್ದಾನೇನೋ ಎಂದು ಹುಡುಕಾಡಿ ಸಾಯುವುದಕ್ಕಿಂತ , ದೇವರನ್ನು ನಂಬಿ ಬದುಕಿ , ಸತ್ತ ನಂತರ ದೇವರಿಲ್ಲ ಎಂದು ಕಂಡುಕೊಳ್ಳುವುದು ಉತ್ತಮ .
  13. ಕೆಲವೊಮ್ಮೆ ಗುಂಡಿಕ್ಕಿಕೊಂಡು ಸಾಯುವುದಕ್ಕಿಂತ ಬದುಕಿರುವುದಕ್ಕೆ ಹೆಚ್ಚು ಧೈರ್ಯ ಬೇಕಾಗುತ್ತದೆ .
  14. ನನ್ನ ಹಿಂದೆ ನಡೆಯದಿರು , ನಿನಗೆ ದಾರಿ ತೋರಲಾರೆನೇನೋ : ನನ್ನ ಮುಂದೆ ನಡೆಯದಿರು , ನಿನ್ನನ್ನು ಹಿಂಬಾಲಿಸಲಾರೆನೇನೋ : ನನ್ನ ಜೊತೆಜೊತೆಯಾಗಿ ನಡೆ , ನನ್ನ ಸ್ನೇಹಿತನಾಗಿ .
  15. ಗುಲಾಮನಿಗೆ ನ್ಯಾಯ ಸಿಗದಿದ್ದರೆ ಅವನಲ್ಲಿ ಮಾಲೀಕನಾಗುವ ಹಂಬಲ ಚಿಗುರೊಡೆಯುತ್ತದೆ .

Thursday, July 16, 2009

valentines day

ಫೆಬ್ರವರಿ 2006 ರಲ್ಲಿ ಕೆಲಸಕ್ಕೆ ಸೇರಿಕೊಂಡ ಸಮಯ. ಆ ಸೆಮಿಸ್ಟರ್ ನ ಕೊನೆಯ ಟೆಸ್ಟ್ ನ ಕೊನೆಯ ದಿನ . ವಿದ್ಯಾರ್ಥಿಯೊಬ್ಬ ತನ್ನ ನೋಟ್ ಪುಸ್ತಕವನ್ನ ಅಲ್ಲೇ ಬಿಟ್ಟು ಹೋಗಿದ್ದ. ಕುಥೂಹಲಕ್ಕೆಂದು ತೆರೆದು ನೋಡಿದಾಗ ಅದರಲ್ಲೊಂದು ಸುಂದರವಾದ ಕವನವೊಂದನ್ನ ಬರೆದಿದ್ದ ಅಥವಾ ಎಲ್ಲಿಂದಲೋ ಬರೆದುಕೊಂಡು ಬಂದಿದ್ದ. ಅವನ ಹಾಗು ಕವಿಯ ಹೆಸರು ಎರಡು ಸಹ ಅದರಲ್ಲಿ ಇರಲಿಲ್ಲ. ಪ್ರೇಮಿಗಳ ದಿನಾಚರಣೆಯ ಬಗ್ಗೆ ಬಹಳ ಅರ್ಥಗರ್ಬಿಥವಾದಂಥಹ ನಾಲ್ಕು ಸುಂದರ ಸಾಲುಗಳು ಓದಿಕೊಳ್ಳಿ

ಪ್ರೇಮಿಗಳ ದಿನಾಚರಣೆಗೆ ಅರ್ಥ

ಹುಡುಕುತಿರೆ ಸಮಯ ವ್ಯರ್ಥ

ಪ್ರೀತಿಸಲು ದಿನವೊಂದು ಬೇಕೆ?

ಬದುಕಿನುದ್ದಕು ಹಂಚಿ ಬಾಳಬಾರದೇಕೆ?